Best Baduku Kannada Quotes for Instagram: Dear readers, welcome to the collection of best life quotes. We invite you to embark on a journey of self-discovery, reflection and growth in this collection of Baduku Kannada Quotes Life Kannada Quotes. Each baduku quotes in kannada will definitely serve as a beacon for you. It sheds light on the essence of what it means to live a meaningful life.
Life is a journey we all embark on with experiences, emotions and uncertainties. We seek guidance and inspiration to navigate life's twists and turns along the way. We find treasures of wisdom in the most profound and thought-provoking quotes.
These baduku kannada quotes offer diverse perspectives on the human experience. Let these life quotes resonate with you. Let it touch your heart and ignite a spark within your soul. Baduku kannada quotes, New baduku kannada quotes, Baduku kannada quotes text, baduku kannada quotes for instagram, Kannada quotes about baduku with images, Kannada baduku quotes with images
Best Baduku Kannada Quotes for Instagram
![]() |
Baduku Kannada Quotes for Instagram |
ಸುಖ ಎಲ್ಲರನ್ನೂ ನಮ್ಮವರೆಂದು ಹೇಳುತ್ತದೆ. ಆದರೆ ದುಃಖ
ಅರ್ಹರನ್ನು ಮಾತ್ರ ನಮ್ಮವರೆಂದು ಹೇಳುತ್ತದೆ.
ನಂಬಿಕೆ ಅನ್ನೂ ಚಿಕ್ಕ ಆಸರೆ ಸಿಕ್ಕರೆ ಸಾಕು,
ಜೀವನದಲ್ಲಿ ಏನನ್ನಾದರು ಸಾಧಿಸಬಹುದು
ಬದುಕು ಸುಂದರ ಎನ್ನುವುದು ಬರೀ ಕಾಲ್ಪನಿಕ
ಅದನ್ನು ಸುಂದರ ಮಾಡುವುದು ನಮ್ಮ ಕಾಯಕ.
ಎಲ್ಲರಿಗೂ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಆದ್ದರಿಂದ ಎಲ್ಲರನ್ನು ಎಲ್ಲರಿಗೂ ವಿವರಿಸಲು ಹೋಗಬಾರದು.
ಸಿಹಿ ಹಣ್ಣು ಕೊಡುವ ಮರವೇ ಜನರಿಂದ ಹೆಚ್ಚು ಕಲ್ಲೇಟು ತಿನ್ನುವುದು, ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಹೆಚ್ಚು ಕಷ್ಟ,ನಿಂದನೆ, ಅಪವಾದಗಳು ಬರುವವು.
ಸಾಧಿಸಬೇಕೆಂಬ ಸಂಸ್ಕೃತಿಯನ್ನು ಮೂಡಿಸಲು
ಬದುಕು ಕಲಿಸುವ ಕಷ್ಟದಿಂದ ಮಾತ್ರ ಸಾಧ್ಯ.
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು,
ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು
ನಾಲ್ಕು ಜನಕ್ಕೆ ಸಹಾಯ ಮಾಡುವ ಗುಣ ನಿನ್ನದಾದರೆ ನೀನು ಯಾವ ದೇವಾಲಯಕ್ಕೂ ಹೋಗಬೇಕಾದ ಅವಶ್ಯಕತೆ ಇಲ್ಲ. ನೀನು ನಂಬಿದ ದೇವರು ನಿನ್ನ ಹುಡುಕುತ್ತ ನಿನ್ನ ಮನೆಗೆ ಬರುವನು.
ಬದುಕೊಂದು ನಾಟಕ ಎಂದರಿತಾಗ ನೆಪವಿಲ್ಲದೆ ನಟನಾಗಿಬಿಡು.
ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವ ಕೂಡ ಬ್ರಾಂಡೆಡ್ ಆಗಿರುತ್ತೆ.
ನೀವು ಬದುಕುತ್ತಿರುವ ಜೀವನವನ್ನು ಪ್ರೀತಿಸಿ ಮತ್ತು
ನೀವು ನಿಜವಾಗಿಯೂ ಪ್ರೀತಿಸುವ ಜೀವನವನ್ನು ಜೀವಿಸಿ.
ನಿಮ್ಮ ಸಮಸ್ಯೆ ಹಡಗಿನಷ್ಟೇ ದೊಡ್ಡದಿರಬಹುದು. ಆದರೆ ಅದನ್ನು ಪರಿಹರಿಸುವ ಸಾಧ್ಯತೆ ಸಮುದ್ರದಷ್ಟೇ ವಿಶಾಲವಾಗಿದೆ ಎಂಬುದನ್ನ ಮರೆಯಬಾರದು. ಯಾವತ್ತೂ ಸಮಸ್ಯೆಯ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸುವ ಬದಲು ಪರಿಹಾರದ ಬಗ್ಗೆ ಯೋಚಿಸಬೇಕು.
Kannada Quotes About Baduku
![]() |
Kannada baduku quotes with images |
ಬದುಕು ಎಂಬುದು ಹತ್ತಿಯಿದ್ದಂತೆ ಅದನ್ನು ಸಂತೋಷವೆಂಬ ಗಾಳಿಯಲ್ಲಿ ಊದಿ ಆದರೆ ಅದನ್ನು ದುಃಖವೆಂಬ ನೀರಿನಲ್ಲಿ ಅದ್ದಬೇಡಿ ” – ಕುವೆಂಪು
ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ
ಪರಿಸ್ಥಿತಿ ಬದಲಾಗುತ್ತದೆ, ಸ್ನೇಹಿತರು ದೂರವಾಗುತ್ತಾರೆ,
ಆದರೆ ಬದುಕು ಮಾತ್ರ ಯಾರಿಗಾಗಿಯೂ ನಿಲ್ಲುವುದಿಲ್ಲ
ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ. ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತೋರುತ್ತದೆ. ನಂಬಿಕೆ, ತಾಳ್ಮೆ ನಿಮ್ಮಲ್ಲಿದ್ದರೆ ಅದರ ಫಲ ಮುಂದೊಂದು ದಿನ ಸಿಹಿಯನ್ನು ನೀಡುತ್ತದೆ.
ಬೀಗಿ ಹಾಳಾಗುವುದರ ಬದಲು ಬಾಗಿ ಎಲ್ಲರೊಳಗೊಬ್ಬನಾಗಿ ಬಾಳಿ ಬದುಕುವುದನ್ನು ಕಲಿ.
ಸರಳತೆಯ ಬದುಕೇ ಸರ್ವಶ್ರೇಷ್ಠ ಬದುಕೆಂಬುದ ತಿಳಿ.
ನದಿಗಳು ಮುಂದಕ್ಕೆ ಸಾಗುವ ಹೊರತು ಹಿಂದೆ ಸರಿಯುವುದಿಲ್ಲ,
ಅದೇ ರೀತಿ ನಮ್ಮ ಜೀವನವನ್ನು ಕೂಡ
ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ ಮುಂದೆ ಸಾಗಬೇಕು.
ನಿನ್ನೆಯ ನೆನಪಲ್ಲಿ ಇಂದು ಜೀವಿಸಿದರೂ ನಾಳಿನ ಭರವಸೆಗಾಗಿ
ಪ್ರಶ್ನೆ ಕೇಳುವುದನ್ನು ನಿಲ್ಲಿಸಬಾರದು ” -ಐನ್‌ಸ್ಟೀನ್ .
ನಾನೇ ಸರಿ ನಂದೇ ಸರಿ ಎನ್ನುವ ಅಹಂಕಾರದ ಪೊರೆ ಎಲ್ಲಿಯವರೆಗೆ ಕಳಚುವುದಿಲ್ಲವೋ ಅಲ್ಲಿಯವರೆಗೆ ಅವರ ತಪ್ಪುಗಳು ಬೇರೆಯವರ ನೋವುಗಳು ಅವರ ಅರಿವಿಗೆ ಬಾರದು.
ಕನಸಿಗೂ ನನಸಿಗೂ ಒಂದೇ ವ್ಯತ್ಯಾಸ. ಕನಸು ಕಾಣಲು
ಶ್ರಮವಿಲ್ಲದ ನಿದ್ದೆ ಬೇಕು. ನನಸು ಆಡಲು ನಿದ್ದೆಯಿಲ್ಲದ ಶ್ರಮ ಬೇಕು.
New Baduku Kannada Quotes
![]() |
New Baduku Kannada Quotes |
ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು,
ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು.
ಕನಸು ನಿಜವಾಗಿರಲ್ಲ ಖುಷಿ ಕೊಡುತ್ತೆ.
ಬದುಕು ಖುಷಿ ಕೊಡಲ್ಲ ನಿಜವಾಗಿರುತ್ತೆ.
ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವ ಎಂಬ ಎರಡು ಅಕ್ಷರ ಪಡೆದು, ವಿದ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರವ ಮರೆಯಬೇಡಿ.
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ
ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು
ಎಡವಿದ ಕಾಲಿಗಿಂತ ಎಡವಿದ ನಾಲಿಗೆ ಅಪಾಯಬರುವುದೆಲ್ಲವನ್ನು ಸ್ವಾಗತಿಸು ಬಂದದ್ದೆಲ್ಲವ ಅನುಭವಿಸು. ತಾತ್ಕಾಲಿಕ ಬದುಕಿನಲ್ಲಿ ಎಲ್ಲವೂ ಕ್ಷಣಿಕ. ಇಲ್ಲ್ಯಾವುದು ಶಾಶ್ವತವಲ್ಲ. ಶಾಶ್ವತವಲ್ಲದ ಬದುಕಿನಲ್ಲಿ ಏನನ್ನು ಶಾಶ್ವತವಾಗಿ ಪಡೆಯಲಾಗುವುದಿಲ್ಲ. ಬದುಕೊಂದು ವಿಸ್ಮಯ. ನಾವಿಲ್ಲಿ ಕೇವಲ ಹುಡುಕಬೇಕಷ್ಟೆ ನಮ್ಮ ಮುಂದಿನ ದಾರಿಯ.
ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವು ಅಲ್ಲ. ಅತಿಯಾದ ಅಹಂಕಾರವು ಅಲ್ಲ. ನೊಂದ ಮನಸ್ಸಿನ ನಿರ್ಧಾರವಷ್ಟೇ.
ಚಿಂತೆ ಮಾಡಿ ಯಾಕೆ ಕೊರಗಬೇಕು.
ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು
ಶ್ರೀಮಂತನೆಂದು ಬೀಗಬೇಡ. ರಾತ್ರಿ ಅರಳುವ ಹೂವಿಗೂ ಗೊತ್ತಿಲ್ಲ.
ಬೆಳಿಗ್ಗೆ ಸ್ಮಶಾನಕ್ಕೂ ದೇವಸ್ಥಾನಕ್ಕೋ ಎಂದು.
ಸಾಧಿಸುವ ತನಕ ಕಿವುಡನಾಗು
ಸಾಧಿಸಿದ ಬಳಿಕ ಮೂಕನಾಗು.
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ,
ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
Baduku Kannada Quotes Text
![]() |
baduku kannada quotes for instagram |
ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ, ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ
ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ.
ನೀನು ಏನು ಎಂದು ತಿಳಿಯಬೇಕಾದರೆ ಸಹಾಯ ಮಾಡಿ ನೋಡು
ಇನ್ನೊಬ್ಬರು ಏನೆಂದು ತಿಳಿಯಬೇಕಾದರೆ ಸಹಾಯ ಕೇಳಿ ನೋಡು.
ನಂಬಿಕೆ ಇಲ್ಲದ ಕಡೆ ವಾದ ಮಾಡಬೇಡ. ತಪ್ಪು
ಇಲ್ಲದ ಕಡೆ ತಲೆ ತಗ್ಗಿಸಬೇಡ. ಬೆಲೆ ಇಲ್ಲದ ಕಡೆ ಪ್ರೀತಿ ಬಯಸಬೇಡ.
ನಿನ್ನಲ್ಲಿ ಎಷ್ಟೇ ಒಳ್ಳೆಯತನ ಇದ್ದರು ಜನ ಗುರುತಿಸುವುದಿಲ್ಲ.
ಬದಲಾಗಿ ಒಂದು ಸಣ್ಣ ತಪ್ಪು ಹುಡುಕಿ ಅದಕ್ಕೆ ಬಣ್ಣ ಹಚ್ಚಿ ಬಿಂಬಿಸುತ್ತಾರೆ.
ಕಾಲ ಯಾರ ಸ್ವತ್ತು ಅಲ್ಲ. ನೊಂದವರಿಗೂ ನೋಯಿಸಿದವರಿಗೂ
ಒಂದಲ್ಲ ಒಂದು ದಿನ ಮಾಡಿದ ಕರ್ಮಕ್ಕೆ ತಕ್ಕ ಫಲ ಕಾದಿರುತ್ತೆ.
ಛಲ ಇರಬೇಕು ಹೊರತು – ಹಠ ಇರಬಾರದು,
ಬಲ ಇರಬೇಕು ಹೊರತು -ಅಹಂ ಇರಬಾರದು,
ಬೇರೆಯವರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದರೆ,
ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು
ಜವಾಬ್ದಾರಿ ಇಲ್ಲದವನು ಮುಂಜಾನೆ ಏಳಲೂ ನೂರು ಬಾರಿ ಯೋಚಿಸುತ್ತಾನೆ
ಜವಾಬ್ದಾರಿ ಇದ್ದವನು ನಿದ್ರೆಯಲ್ಲಿ ಸಹ ಎದ್ದಿರುತ್ತಾನೆ.
ದೊಡ್ಡ ದೊಡ್ಡ ಮಾತನಾಡುವುದರಿಂದ ಪ್ರಬುದ್ಧರಾಗುವುದಿಲ್ಲ.
ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತಾಗ ಮಾತ್ರ ಪ್ರಬುದ್ಧರಾಗುತ್ತೇವೆ.
ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ
ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ,
ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ, ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ
ಜೀವನದಲ್ಲಿ ಯಾರ ಬಗ್ಗೆನೂ ಯೋಚನೆ ಮಾಡದೇ ನಿನ್ನ
ಕುಟುಂಬವೇ ಎಲ್ಲಾ ಎಂದು ತಿಳಿದು ಬದುಕು. ಅದೇ ನಿಜವಾದ ಬದುಕು.
ಒಂದು ಕನಸು ನುಚ್ಚು ನೂರಾದ ನಂತರವೂ
ಮತ್ತೊಂದು ಕನಸನ್ನು ಕಾಣುವ ಧೈರ್ಯವೇ ಬದುಕು.
ALSO READ : 👇🏻🙏🏻❤️
Kannada Quotes About Baduku with Images
![]() |
Kannada Quotes About Baduku with Images |
ಮಸಣಕ್ಕೆ ಹೊರಟ ತೇರಿಗೆ ಎಷ್ಟೇ ಹೂವಿಂದ ಅಲಂಕಾರ ಮಾಡಿದರು ವ್ಯರ್ಥ.
ಹಾಗೆಯೇ ಮನುಷ್ಯತ್ವ ಅರಿಯದ ಜನರಿಗೆ ಎಷ್ಟೇ ಪ್ರೀತಿ ತೋರಿಸಿದರು ವ್ಯರ್ಥ.
ಇಂದಿನ ಸಂಬಂಧಗಳು ಸೂರ್ಯಕಾಂತಿ ಹೂವುಗಳಂತೆ
ಎಲ್ಲಿ ಹೆಚ್ಚು ಲಾಭ ಸಿಗುತ್ತದೋ ಆ ಕಡೆ ತಿರುಗಿ ಬಿಡುತ್ತದೆ.
ಸಿಗದ ಖುಷಿಗೆ ಆಸೆ ಪಡುವುದು ಮೂರ್ಖತನ.
ಸಿಗುವ ಖುಷಿಯಲ್ಲೇ ಕನಸು ಕಟ್ಟಿ ಬದುಕುವುದು ಜೀವನ.
ಯಾವುದೇ ವಿಷಯ ಆಗಲಿ. ನಮ್ಮ ಜೀವನಕ್ಕೆ ಬರುವ ಮುಂಚೆ ಮತ್ತು ಅದು ನಮ್ಮ ಜೀವನದಿಂದ ದೂರ ಹೋದ ಮೇಲೆ ಮಾತ್ರ ನಮಗೆ ಅದರ ಮಹತ್ವ ಅರ್ಥವಾಗುವುದು.
ಬದುಕು ಎಲ್ಲ ಪಾಠಗಳನ್ನು ಕಲಿಸಿದರು ಯಾರನ್ನ ನಂಬಬೇಕು ಯಾರನ್ನ
ನಂಬಬಾರದು ಅನ್ನೋ ಪಾಠ ಮಾತ್ರ ಅರ್ಥವೇ ಆಗ್ತಿಲ್ಲ ಇನ್ನು.
ಮರಳಿನ ಮೇಲೆ ಮರಳು ಅಂತ ಬರೀಬಹುದು,
ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ!
ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.
ALSO READ : 👇🏻🙏🏻❤️
Kannada Baduku Quotes with Images
ಒಂದು ದಿನ ಕನಸು ಜೀವವನ್ನು ಕೇಳುತ್ತೆ,
ನಾನು ಯಾವಾಗ ನನಸು ಆಗೋದು ಅಂತ …
ಆಗ ಜೀವನ ನಗುತ್ತಾ ಹೇಳುತ್ತೆ ಎಲ್ಲಾ
ಕನಸುಗಳು ನನಸಾದರೆ ಜೀವನಕ್ಕೆ ಅರ್ಥಾನೇ ಇರೋಲ್ಲ ಅಂತ
ಏನೆ ನಡೆದರೂ ಯೋಚನೆ ಮಾಡುತ್ತಾ ನಿಲ್ಲಬೇಡ. ಏನು ನಡೆದರೂ
ಅದು ನಮ್ಮ ಒಳ್ಳೆಯದಕ್ಕೆ ನಡೆಯುತ್ತದೆ.
ಯಾರು ನಿನ್ನವರು, ಯಾವುದು ನಿನ್ನದು ಎಂಬುದು
ಅರ್ಥವಾಗುವುದು ಸಮಯ ಬಂದಾಗ ಮಾತ್ರ.
ALSO READ : 👇🏻🙏🏻❤️