Saturday, December 16, 2023

91+ Best Subhashita in Kannada | ಕನ್ನಡ ಸುಭಾಷಿತ ನುಡಿಮುತ್ತುಗಳು

Hello friends, in today's article we have brought for you Beautiful Subhashita in Kannada, kannada subhashita nudimuttugalu which you will definitely like, so let's see Subhashita in kannada images, Subhashita in kannada for students, today subhashita in kannada.

 Best Subhashita in Kannada | ಕನ್ನಡ ಸುಭಾಷಿತ ನುಡಿಮುತ್ತುಗಳು

Subhashita in kannada with meaning
Subhashita in kannada with meaning

ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ. 

ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ. — ಸರ್ವಜ್ಞ.


ತಾನಾಗಿ ಬರುವುದು; ತಾರುಣ್ಯ, ಮುಪ್ಪು

ಜೊತೆಯಲ್ಲೇ ಬರುವುದು; ಪಾಪ, ಪುಣ್ಯ

ತಡೆಯಿಲ್ಲದೆ ಬರುವುದು; ಆಸೆ, ದುಃಖ

ಅನಿವಾರ್ಯವಾಗಿ ಬರುವುದು; ಹಸಿವು, ದಾಹ

ನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟು

ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು


ಆದರ್ಶ ಗೃಹಸ್ಥನಾಗುವುದು , ಆದರ್ಶ 

ಸನ್ಯಾಸಿಯಾಗುವುದಕ್ಕಿಂತ ಬಹಳ ಕಷ್ಟ. -- ಸ್ವಾಮಿ ವಿವೇಕಾನಂದ.


ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , 

ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ


ತಾನು ಎಲ್ಲವನ್ನೂ ಬಲ್ಲೆನೆಂದು 

ತಿಳಿಯುವವನೆ ಮೂರ್ಖ. — ಮಹಾಭಾರತ.


ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.


ನಿರ್ಭಯವೂ ನಿಷ್ಪಕ್ಷಪಾತವೂ ಆದ 

ಜಗತ್ತಿನ ಅನ್ವೇಷಣೆಯೇ ವಿಜ್ಞಾನ. —‘ ಸಿ.ವಿ.ರಾಮನ್.

Subhashita in Kannada for Students

Subhashita in kannada
Subhashita in kannada

ಯಾರನ್ನಾದರೂ ಮರೆಯುವುದಾದರೆ ಮರೆತುಬಿಡಿ, ಆದರೆ!

ಯಾರನ್ನು ಮರೆತಿದ್ದೇವೆ ಎಂಬುವುದನ್ನು ನೆನಪಿಟ್ಟುಕೊಳ್ಳಿ


ಸೋಲು ಎಂಬುದು ಮತ್ತೊಮ್ಮೆ ಹೆಚ್ಚು 

ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ


ಪ್ರೀತಿಯಲ್ಲಿ ಬೀಳುವುದಕ್ಕೆ ಗುರುತ್ವಾಕರ್ಷಣ ಶಕ್ತಿಯನ್ನು ಬೈದು ಪ್ರಯೋಜನವಿಲ್ಲ. ಅದೊಂದು ಜೈವಿಕ ಕ್ರಿಯೆ; ಭೌತ ಮತ್ತು ರಸಾಯನಶಾಸ್ತ್ರಕ್ಕೆ ಅಲ್ಲಿ ಸ್ಥಳವಿಲ್ಲ.— ಆಲ್ಬರ್ಟ್ ಐನ್ ಸ್ಟೀನ್


ನಿನ್ನನ್ನು ಪೀಡಿಸುವ ಸಂಕಟಗಳನ್ನು 

ನಗುನಗುತ್ತಾ ನಾಶಪಡಿಸು.— ಸ್ವಾಮಿ ವಿವೇಕಾನಂದ.


ಸಾಯುವುದು ಸುಲಭ, ಬಾಳುವುದು ದೊಡ್ಡ 

ಹೊಣೆಗಾರಿಕೆ. — ಎಸ್. ವಿ.ರಂಗಣ್ಣ.


ಭಾಷೆಯ ಬಗ್ಗೆ ಒಂದು ಸುಭಾಷಿತ; ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ.


ಬುಧಿವಂತರಾದವರು ಹಿಂಜರಿಯದೆ ಹತ್ತಿರ ಹೋಗಿ 

ಆಪ್ತನಾದವನು ಸೇರಬೆಕು


ಸೋಲಾದಾಗ ಎಲ್ಲರೂ ನಿನ್ನನು ನಿಂದಿಸಿದರೂ

ನೀನು ನಗುತ್ತಿದ್ದರೆ

ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ

ನೀನು ನಿನ್ನನೇ ನಂಬುತ್ತಿದ್ದರೆ

ಅರಸರಲ್ಲಿಯೂ ಆಳುಗಳ ಮಧ್ಯೆಯೂ

ನೀನು ನಿನ್ನ ತಲೆಯನ್ನು ಅತ್ಮವಿಶ್ವಸದಿಂದ ಎತ್ತಿದ್ದರೆ

ಈ ಜಗತ್ತೇ ನಿನ್ನದಾಗುತ್ತದೆ

ಅಂತವನೇ ನಿಜವಾದ ಮಾನವ

ಉಳಿದವರೆಲ್ಲರೂ ಠೊಳ್ಳು ಮಾನವರು"

- ರುಡ್ಯಾರ್ಡ್ ಕ್ಲಿಪ್ಲಿಂಗ್ - ಅನುವಾದ

Today Subhashita in Kannada

Subhashita in kannada images
 Subhashita in kannada for students

ನೀವು ಹುಟ್ಟುವಾಗ ಏನನ್ನೂ 

ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ


ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , 

ಅವಕಾಶವೆಂಬ ತಂದೆಗೆ ಜನಿಸುವ ಮಗು.—ಗುರುನಾನಕ್.


ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. 

ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ._ಕುವೆಂಪು


ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ.


ದೊಡ್ಡ ಯೋಚನೆಗಳೊಡನೆ ಇರುವವರು 

ಎಂದೂ ಏಕಾಂಗಿಗಳಲ್ಲ.-ಸರ್.ಫಿಲಿಪ್ ಸಿಡ್ನಿ.


ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ 

ಚಂಡಮಾರುತದಿಂದಲೂ ಫಾರಾಗಿಸಬಲ್ಲದು


ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು 

ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು.- ಶಿವರಾಮ ಕಾರಂತ.


ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. –ಕುವೆಂಪು.


ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ; 

ಲೋಕ ಧರ್ಮದ ಹಿತಕ್ಕಾಗಿ ಅಲ್ಲ. —ಡಿ.ವಿ.ಜಿ.

Beautiful Subhashita in Kannada

Subhashita in kannada for students
 today subhashita in kannada

ಕೆಟ್ಟದ್ದನು ನುಡಿವವರನ್ನು 

ಉಪಾಯವಾಗಿ ತೊರೆಯುವುದು ವಿವೇಕ


ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮವನ್ನು 

ತಾವೇ ಕಂಡುಕೊಳ್ಳಬೇಕು.ಧರ್ಮದ ದಾರಿ ಒಂದಲ್ಲ,ಹಲವು.— ಕೆ.ಎಂ. ಮುನ್ಷಿ.


ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , 

ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ


ನಾವಾಡುವ ಮಾತು ನಮ್ಮ ಬದುಕಿಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ:

ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/

ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ//


ಗುಣಾತ್ಮಕವಾಗಿ ಯೋಚಿಸುವುದಿಲ್ಲ ಎಂದಾದಲ್ಲಿ 

ನೀವು ಕನಿಷ್ಠ ಪಕ್ಷ ಸುಮ್ಮನಾದರೂ ಇರಿ.– ಜೋಯೆಲ್ ಆಸ್ಟಿನ್ .


ಪ್ರತಿಭೆಗೆ ಶಾಸ್ತ್ರಜ್ಞಾನವಿದ್ದರೆ 

ವಜ್ರಕ್ಕೆ ಕುಂದಣವಿಟ್ಟಂತೆ.—–ತ.ರಾ.ಸು.


ನೀರಿಗಿಂತ ತಿಳಿಯಾದದ್ದು ; ಜ್ಞಾನ

ಭೂಮಿಗಿಂತ ಭಾರವಾದದ್ದು ; ಪಾಪ

ಕಾಡಿಗಿಂತ ಕಪ್ಪಾಗಿರುವುದು ; ಕಳಂಕ

ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ

ಮಂಜಿಗಿಂತ ಹಗುರವಾದದ್ದು ; ಪುಣ್ಯ

ಗಾಳಿಗಿಂತ ವೇಗವಾಗಿರುವುದು ; ಮನಸ್ಸು

Kannada Subhashita Nudimuttugalu

today subhashita in kannada
Beautiful Subhashita in Kannada

ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. —ಪಿ.ಸೈರಸ್.


ಮೌನ ಅನಂತದಷ್ಟು ಆಳವಾದದ್ದು.

ಮಾತು ಕಾಲದಷ್ಟು ಕ್ಷಣಿಕ. - ಥಾಮಸ್ ಕಾರ್ಲೈಲ್.


ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ 

ಒಲೆಯುತ್ತಾಳೆ , ಹೇಡಿಗಳಿಗಲ್ಲ


ರೂಪ ಕಣ್ಣುಗಳಿಗೆ ಸೀಮಿತ.ಗುಣ , 

ಆತ್ಮದವರೆಗೆ ತಲುಪುವ ಸಾಧನ.—ತ್ರಿವೇಣಿ.


ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯೂ ಬಾಡಿಹೋಯಿತು(ಸಪ್ಪೆಯಾಯಿತು); ಸಕ್ಕರೆ ಕಲ್ಲಾಗಿಹೋಯಿತು (ರುಚಿಇಲ್ಲದ್ದು). ಅಮೃತವು ಹೆದರಿ ಸ್ವರ್ಗಕ್ಕೆ ಓಡಿಹೋಯಿತು


ದುರಳರೊಂದಿಗೆ ಸ್ನೇಹವನ್ನು ಬಿಡು , 

ಉತ್ತಮರ ಹಿತವಾದಗಳನ್ನು ನೆನಪಿನಲ್ಲಿಟ್ಟುಕೊಂಡಿರು


ಜಗತ್ತಿನಲ್ಲಿ ಹೇಳುವವರಿಗಿಂತ , 

ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು.– ಗಳಗನಾಥ.


ಕಾಲದ ಮರಳಿನಲ್ಲಿ ಹೆಜ್ಜೆಗುರುತುಗಳನ್ನು ಬಿಡು.ಕಾಲನ್ನೆಳೆಯುತ್ತಾ 

ನಡೆಯಬೇಡ.-ಎ.ಪಿ.ಜೆ.ಅಬ್ದುಲ್ ಕಲಾಂ.

ALSO READ : 👇🏻🙏🏻❤️

Subhashita in Kannada with Meaning

Beautiful Subhashita in Kannada,
kannada subhashita nudimuttugalu

ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಹೇಳಬೇಡ. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ.


ಜೀವನದ ಹಾದಿಯಲ್ಲಿ ಕಷ್ಟಗಳೆಂಬ ಉಬ್ಬುಗಳಿದ್ದರೂ 

ಸುಖವೆಂಬ ಇಳಿಜಾರುಗಳೂ ಇರುತ್ತವೆ


ಜಾತಿಯನ್ನು ಕೇಳಬೇಡಿ , 

ಹೇಳಬೇಡಿ ಮತ್ತು ಅದರ ಬಗ್ಗೆ ಚಿಂತಿಸಲೂಬೇಡಿ.— ನಾರಾಯಣ ಗುರು.


ಬಂಧಿತನಾದ ದೇವರೇ ಮನುಷ್ಯ ;

 ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. — ರಾಮಕೃಷ್ಣ ಪರಮಹಂಸ.


ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ


ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ;ಆದರೆ ಆತನ ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ. — ಅಬ್ರಹಾಂ ಲಿಂಕನ್.


ಹೊಗಳಿಕೆಯ ಮಾಲಿನ್ಯವನ್ನು ತೊಡೆದು ಹಾಕಲು ಏಕಮಾತ್ರ ಉಪಾಯ: ಕೆಲಸ ಮತ್ತು ಇನ್ನಷ್ಟು ಕೆಲಸ. -ಆಲ್ಬರ್ಟ್ ಐನ್ ಸ್ಟೀನ್.


ಹಣಕ್ಕೆ ಕೈ , ಕಾಲುಗಳಿದ್ದಂತೆ ಉಪಯೋಗಿಸಿ, ಇಲ್ಲವೇ ಕಳೆದುಕೊಳ್ಳಿ.—ಹೆನ್ರಿ ಫೋರ್ಡ್.


ನುಡಿದಂತೆ ನಡೆದುಕೊಳ್ಳದವನು ಶ್ರೇಷ್ಠನಾಗಲು ಸಾಧ್ಯವೆ ಇಲ್ಲ


ಕ್ಷಮಿಸುವುದು ಉತ್ತಮ. ಮರೆತುಬಿಡುವುದು ಸರ್ವೋತ್ತಮ. _ ರಾಬರ್ಟ್ ಬ್ರೌನಿಂಗ್.


ಸತ್ಯವನ್ನು ಹೇಳುವವನು , ಸ್ವಾರ್ಥವನ್ನು ಗೆದ್ದವನು ನಿಜವಾದ ಸುಖಿ.— ಬುದ್ಧ.

No comments:
Write comment